ನೈರೋಬಿ(ಜ:16): ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸ್ಥಳೀಯ ಕಾಲಮಾನ 3 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಶಸ್ತ್ರಾಸ್ತ್ರಧಾರಿಯೊಬ್ಬ ಹೋಟೆಲ್ ಎದುರಿನ ವಾಹನಗಳ ಮೇಲೆ ಬಾಂಬ್ ಎಸೆದಿದ್ದ,ಇದರ ಬೆನ್ನಲ್ಲೇ ಮತ್ತೊಬ್ಬ ಉಗ್ರ ತನ್ನನ್ನು ತಾನೇ ಸ್ಪೋಟಗೊಳಿಸಿಕೊಂಡಿದ್ದಾನೆ.

ಉಗ್ರರ ಗುಂಡಿನ ದಾಳಿಗೆ ಪ್ರಾಣ ಉಳಿಸಿಕೊಳ್ಳಲು ಹೋಟೆಲ್ ಒಳಗಿದ್ದ ಅನೇಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ,ಆ ಸಮಯದಲ್ಲಿ ಗುಂಡು ತಗುಲಿ 15ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ,30ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು,ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ,ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.