ಯಲ್ಲಾಪುರ(ಜ:10): ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ತಂದೆಯೇ ಕೊಂದ ಅಮಾನವೀಯ ಘಟನೆ ಯಲ್ಲಾಪುರ ತಾಲೂಕಿನ ಕುಂಬ್ರಿಯಲ್ಲಿ ನಡೆದಿದೆ.

ನಯನಾ(11) ಕೊಲೆಯಾದ ದುರ್ದೈವಿ. ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ನಯನಾಳ ಚಿಕಿತ್ಸೆಗೆ ತಂದೆ ನಾಗರಾಜ್ ಸಾಕಷ್ಟು ಖರ್ಚು ಮಾಡಿದ್ದ, ಮಗಳಿಗೆ ಖರ್ಚು ಮಾಡಿ ಸಾಲದ ಹೊರೆ ಏರಿಸಿಕೊಂಡಿದ್ದ ಆತ,ಮಕ್ಕಳು ಹಾಗೂ ಪತ್ನಿಗೆ ಹಿಂಸೆ ಮಾಡುತ್ತಿದ್ದ ಎನ್ನಲಾಗಿದೆ.

ಜ.5 ರಂದು ಇಬ್ಬರು ಮಕ್ಕಳಿಗೆ ಹೊಡೆದು ಗಾಯಗೊಳಿಸಿದ್ದ,ಪುನಃ ಬುಧವಾರ ಕೂಡ ನಯನಾಳಿಗೆ ಸಿಟ್ಟಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.