ಬೆಂಗಳೂರು:(ಜ14): ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದೆ ಇದ್ದ ಕಾರಣ ಫೆ 13 ರಂದು ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಎ. ಲಕ್ಷೀನಾರಾಯಣಗೌಡ ಹೇಳಿದ್ದಾರೆ.

ವಿಶ್ವ ರೈತರ ನಾಯಕರಾದ ಪ್ರೋ. ಎಂ.ಸಿ. ನಂಜುಂಡಸ್ವಾಮಿಯವರ ಜನ್ಮದಿನದಂದು ಮುತ್ತಿಗೆ ಹಾಕುವುದರ ಜೊತೆಗೆ ರೈತರ ಸಾಲಮನ್ನಾ ಫಸಲ್ ಭೀಮಾ ಯೋಜನೆಯ ನ್ಯೂನತೆಯನ್ನು ಸರಿಪಡಿಸ ಬೇಕು, ಜೊತೆಗೆ ಉದ್ಯೋಗ ಖಾತ್ರಿ ಯೋಜನೆ ಎಲ್ಲಾ ಪ್ರದೇಶಕ್ಕೂ ತಲುಪುವಂತಹ ಕೆಲಸವಾಗ ಬೇಕು.

ಇವೆಲ್ಲದರ ಮಧ್ಯೆ ಮಹದಾಯಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಧೀಕರಣದ ತೀರ್ಪಿನ ಅನ್ವಯ ಮಲಪ್ರಭೆಗೆ ನೀರು ಹರಿಸಬೇಕು. ಈ ಎಲ್ಲಾ ಬೇಡಿಕೆಗಳನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.