ಬೆಂಗಳೂರು:(ಫೆ08): ಸಿಎಂ ಕುಮಾರಸ್ವಾಮಿ ಇಂದು ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದು, ರೈತರನ್ನು ಮುಖ್ಯವಾಗಿಸಿಕೊಂಡು ಬಜೆಟ್ನ ಮಂಡಿಸುತ್ತಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನಮ್ಮ ಚಿಂತನೆ ಎಲ್ಲವೂ ರೈತರ ಪರವಾಗಿದೆ ಎಂದು ಸಿಎಂ ಬಜೆಟ್ ನಲ್ಲಿ ಹೇಳಿದ್ದಾರೆ.
ರೈತರ ಸಮಸ್ಯೆಯನ್ನು ತಿಳಿದು ಅವರಿಗೆ ಪರಿಹಾರ ನೀಡುವುದು ನಮ್ಮ ಸರ್ಕಾರದ ಹೊಣೆ. ರೈತರ ಬೆಳೆ ಸಾಲ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸುವುದರ ಮೂಲಕ ಆತ್ಮವಿಶ್ಟಾಸ ಮೂಡಿಸುತ್ತೇವೆ.

ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿ. ಕೃಷಿ ಪದ್ಧತಿಯಲ್ಲಿ ಬದಲಾವಣೆಯನ್ನು ತರುವುದು ಅಗತ್ಯವಾಗಿದೆ. ಅದು ನಮ್ಮ ಗುರಿˌ ಜೊತೆಗೆ ಕಾವೇರಿ ನೀರನ್ನ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಕ್ರಮಕೈಗೊಳಲಾಗಿದೆ. ಇಂದಿನ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ರೈತರಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದಾರೆ.