ಬೆಂಗಳೂರು(ಜ:04): ಪೋಲಿಯೋ ಲಸಿಕೆಯಲ್ಲಿ ವೈರಸ್ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಆದರೆ ಇದು ಸುಳ್ಳು ಸುದ್ದಿ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಮುಂಬರುವ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಬಾರದು ಎಂದು ಕೇಳಿಕೊಳ್ಳುತ್ತಿದ್ದೇವೆ, ಏಕೆಂದರೆ ಈ ಬಾರಿಯ ಪೋಲಿಯೋ ಹನಿಯಲ್ಲಿ ವೈರಲ್ ಫೀವರ್ ಕಂಡುಬರುತ್ತಿದೆ, ಲಸಿಕೆ ತಯಾರು ಮಾಡುವ ಸಂಸ್ಥೆಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ, ಮುಂದಿನ ಆದೇಶ ಬರುವ ತನಕ ಲಸಿಕೆ ಹಾಕಿಸಬಾರದು ಎಂದು ವ್ಯಕ್ತಿಯೊಬ್ಬ ಮಾತನಾಡಿರುವ ಆಡಿಯೋ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ, ಇದು ಸುಳ್ಳು ಸುದ್ದಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.