ಮುಂಬೈ(ಜ,25): ಫೇಸ್ಬುಕ್ ತನ್ನ ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸಿದ್ದ ಹಗರಣದ ನಂತರ, ವಿಶ್ವದ ಅತಿದೊಡ್ಡ ಸಾಮಾಜಿಕ ನೆಟ್‍ವರ್ಕ್ ಸಾರ್ವಜನಿಕ ವಿಶ್ವಾಸವನ್ನು ಮರಳಿ ಪಡೆಯಬೇಕು ಎಂದು ಫೇಸ್ಬುಕ್ ಇಂಕ್ ಕಾರ್ಯಚರಣೆ ಮುಖ್ಯಸ್ಥೆ ಶೆರಿಲ್ ಸ್ಯಾಂಡ್ ಬರ್ಗ್ ಬುಧವಾರ ಹೇಳಿದ್ದಾರೆ.

ಜನವರಿ 23 ರಂದು ಸ್ವಿಜರ್‍ಲ್ಯಾಂಡ್ ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಶೆರಿಲಾ, ಸಾಮಾಜಿಕ ಜಾಲತಾಣವು ತನ್ನ ನೆಟ್ ವರ್ಕ್ ಭದ್ರತೆಯನ್ನು ಸುಧಾರಿಸಲು ವರ್ಷಕ್ಕೆ ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಬಳಕೆದಾರರ ವೈಯಕ್ತಿಕ ಡೇಟಾವನ್ನು ಅನೇಕ ಜನರು ಸಂಪರ್ಕಿಸುವ ಅಪಾಯಗಳನ್ನು ನಾವು ನಿರೀಕ್ಷಿಸಲಿಲ್ಲ ಎಂದು ಸ್ಯಾಂಡ್ ಬರ್ಗ್ ಹೇಳಿದ್ದಾರೆ. ತಮ್ಮ ವೈಯಕ್ತಿಕ ಮಾಹಿತಿಯ ಮೇಲೆ ಬಳಕೆದಾರರು ಹೆಚ್ಚಿನ ನಿಯಂತ್ರಣವನ್ನು ನೀಡುವ ವೈಶಿಷ್ಟ್ಯಗಳನ್ನು ಸೇರಿಸಿದ್ದಾರೆ.

ಕಳೆದ ವರ್ಷ ಯು.ಕೆ ಸಲಹಾ ಕೇಂಬ್ರಿಡ್ಜ್ ವಿಶ್ಲೇಷಕರು ಮಿಲಿಯನ್ ಗಟ್ಟಲೆ ಬಳಕೆದಾರರ ವೈಯಕ್ತಿಕ ಡೆಟಾವನ್ನು ಚುನಾವಣಾ ಪ್ರಚಾರವನ್ನು ಗುರಿಯಾಗಿಸಿಟ್ಟುಕೊಂಡು ಕದಿಯಲಾಗಿತ್ತು ಎಂಬ ಮಾಹಿತಿ ಬಹಿರಂಗವಾದ ಮೇಲೆ ಫೇಸ್ಬುಕ್ ಟೀಕೆಗೆ ಗುರಿಯಾಗಿತ್ತು.