ಕಾಶ್ಮೀರ:(ಫೆ15): ನಿನ್ನೆ ಜಮ್ಮಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಹಟ್ಟಹಾಸಕ್ಕೆ 44 ಯೋಧರು ಮಡಿದಿದ್ದಾರೆ. ಕೇಂದ್ರದ ಮೀಸಲು ಪೊಲೀಸ್ ಪಡೆಯು ಪ್ರಯಾಣಿಸುತ್ತಿದ್ದ, ಬಸ್‍ಗೆ ಉಗ್ರನೊಬ್ಬ ಸ್ಪೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದು, 44 ಜನ ಯೋಧರು ಹುತಾತ್ಮರಾಗಿದ್ದಾರೆ.

ಈ ದಾಳಿಯ ಹೊಣೆಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊತ್ತಿದ್ದು, ಸ್ಪೋಟಕಗೊಂಡ ಸ್ಥಳದಲ್ಲಿ ವಾಹನದ ಭಾಗಗಳು ಚಿದ್ರಚಿದ್ರವಾಗುವುದರ ಜೊತೆಗೆ ಯೋಧರ ದೇಹದ ಭಾಗಗಳು ಚದುರಿ ಹೋಗಿವೆ.

ಪುಲ್ವಾಮಾ ದಾಳಿಯ ಹಿಂದೆ ಕೆಲಸ ಮಾಡಿದ ವ್ಯಕ್ತಿ ಜೈಶೆ ಕಮಾಂಡರ್ ಅಬ್ದುಲ್ ರಶೀದ್ ಘಾಜಿ ಎನ್ನಲಾಗುತ್ತಿದ್ದು, ಈತನು ಆಫ್ವನ್ ಯುದ್ಧದಲ್ಲೂ ಮುಖ್ಯ ಪಾತ್ರವಹಿಸಿದ್ದ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಅಬ್ದುಲ್ ರಶೀದ್ ಘಾಜಿ ಸುಧಾರಿತ ಸ್ಪೋಟಕಗಳ ತಜ್ಞನಾಗಿದ್ದು, ದಾಳಿಗೆ ಬೇಕಾದ ಸ್ಪೋಟಕಗಳನ್ನು ತಯಾರಿಸಿ ಕೊಟ್ಟಿದ್ದನೆಂದು ಕೇಳಿಬರುತ್ತಿದೆ.