ಮುಂಬೈ(ಜ.12): ಬಾಲಿವುಡ್ ನ ಸಕ್ಸಸ್ ಫುಲ್ ನಿರ್ದೇಶಕಿ ಫರಾಹ್ ಖಾನ್ ದೀಪಿಕಾ ಪಡುಕೋಣೆ ನಂತರ ವಿಶ್ವಸುಂದರಿ ಮನೋಷಿ ಚಿಲ್ಲಾರ್ ಅವರನ್ನು ಬಾಲಿವುಡ್ ಗೆ ಪರಿಚಹಿಸುವ ಪ್ಲಾನ್‍ಲ್ಲಿ ಇದ್ದಾರೆ ಎನ್ನಲಾಗಿದೆ.

ಓಂ ಶಾಂತಿ ಓಂ ಶಾಂತಿ ಮೂಲಕ ಬಾಲಿವುಡ್ ಗೆ ಕಾಲಿಟ್ಟ ದೀಪಿ ಇಂದು ಬಾಕ್ಸ್ ಆಫೀಸ್ ನ್ನು ಆಳುತ್ತಿದ್ದರೆ.

ಈಗಾಗಲೇ ತಮ್ಮ ಮುಂದಿನ ಸಿನಿಮಾದ ಸ್ಕ್ರಿಪ್ಟ ರೆಡಿಯಾಗಿದ್ದು,ಸಿನಿಮಾದ ಕುರಿತು ಚರ್ಚೆ ನಡೆಸಲು ಫರಾಹ್ ಮನೋಷಿ ಅವರನ್ನು ಭೇಟಿ ಮಾಡಿದ್ದಾರೆ. ಹಲವು ಬಾರಿ ಮನುಷಿ ಚಿತ್ರೋದ್ಯಮದಲ್ಲಿ ಸೇರುವ ಆಸಕ್ತಿ ಯನ್ನು ವ್ಯಕ್ತಪಡಿಸಿದ್ದು, ರಣಬೀರ್ ಸಿಂಗ್ ಜೊತೆ ಒಂದು ಜಾಹಿರಾತಿನಲ್ಲಿಯೂ ಸಹ ಕಾಣಿಸಿಕೊಂಡಿದ್ದರು.

ಇನ್ನು ಮನೋಷಿಯನ್ನ ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾತುರಾಗಿದ್ದು, ಮನೋಷಿ ಬಾಲಿವುಡ್ ಗೆ ಎಂಟ್ರಿ ಕೋಡ್ತಾರಾ ಎಂಬುದು ಭಾರಿ ಕೂತುಹಲ ಮೂಡಿಸಿದೆ.