ಕೊಪ್ಪಳ[ಏ.02]: ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ‌ ನೆಗೆದು ಬೀಳ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಮತ್ತೆ ನಾಲಿಗೆ ಹರಿ ಬಿಟ್ಟಿದ್ದಾರೆ.
ಕೊಪ್ಪಳದಲ್ಲಿ ಶಿವಶಾಂತವೀರ ಮಂಗಲ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಚುನಾವಣೆ ಮುಗಿದ ಕೂಡಲೇ ಸರ್ಕಾರ ಬೀಳುತ್ತೆ ಅನ್ನೋ ಭರದಲ್ಲಿ ಕುಮಾರಸ್ವಾಮಿಯೇ ನೆಗದು ಬಿಳ್ತಾರೆಂದು ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇನ್ನು ದೇವೇಗೌಡರ ಕುಟುಂಬದ ರಾಜಕೀಯ ಬಗ್ಗೆ ಕಿಡಿಕಾರಿದ ಈಶ್ವರಪ್ಪ ಕುಮಾರಸ್ವಾಮಿ ಮಂಡ್ಯ ಮುಖ್ಯಮಂತ್ರಿ, ರೇವಣ್ಣ ಹಾಸನ ಪಿ.ಡಬ್ಲ್ಯೂ.ಡಿ ಸಚಿವರು, ದೇವೇಗೌಡ ತುಮಕೂರಿನ ಮಾಜಿ ಪ್ರಧಾನ‌ಮಂತ್ರಿ ಇವರು ಮೂರು ನಾಲ್ಕು ಜಿಲ್ಲೆ ಮಾತ್ರ ಸೀಮಿತರಾಗಿದ್ದಾರೆ. ಬರೆದಿಟ್ಟುಕೊಳ್ಳಿ ಈ ಬಾರಿ ಜೆಡಿಎಸ್ ಒಂದು ಸೀಟ್ ಕೂಡಾ ಗೆಲ್ಲಲ್ಲ‌, ಇವರು ಕಣ್ಣೀರಾಕುವ ನಾಟಕ ಬಹಳ ದಿನ ನಡೆಯಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.