ಬೆಂಗಳೂರು:(ಮಾ14): ರಶ್ಮಿಕಾ ಮಂದಣ್ಣ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸುದ್ದಿ ವೈರಲ್ ಆಗಿತ್ತು. ಆದರೀಗ ರಶ್ಮಿಕಾ ಮಂದಣ್ಣ ಕಾಲಿವುಡ್‍ನ ಎಂಟ್ರಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದರ ಬಗ್ಗೆ ತಮಿಳು ಚಿತ್ರ ಮೂರ್ಹತ ಕಾರ್ಯಕ್ರಮದಲ್ಲಿ ಖಚಿತ ಪಡಿಸಿದ್ದಾರೆ. ಆ ಫೋಟೋಗಳನ್ನು ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ರಶ್ಮಿಕಾ ತಮಿಳು ನಟ ಕಾರ್ತಿಕ್ ಜೊತೆ ನಟಿಸುತ್ತಿದ್ದಾರೆ. ಈ ಸಿಮಾನಕ್ಕೆ ಭ್ಯಾಗ್ಯರಾಜ್ ಕಣ್ಣನ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಟಿ ರಶ್ಮಿಕಾ ಮಂದಣ ಅವರು ತಮಿಳಿನಲ್ಲಿ ನಟಿಸುತ್ತಿರುವ ಮೊದಲ ಚಿತ್ರ ಇದಾಗಿರುತ್ತದೆ.

ನನಗೆ ಕನ್ನಡ ಮತ್ತು ತೆಲುಗು ಜನರು ಬೆಂಬಲ ನೀಡುತ್ತಿದ್ದು, ನಂತರ ತಮಿಳಿಗೆ ಯಾವಾಗ ಬರುತ್ತೀರಾ ಎಂದಿದ್ರು, ಈಗ 2019 ರ ಕೊನೆಯಲ್ಲಿ ಕಾಲಿವುಡ್‍ಗೆ ಎಂಟ್ರಿಕೊಡುತ್ತಿದ್ದೇನೆ. ತಮಿಳು ಸಿನಿಮಾ ಕಲಾವಿಧರ ಜೊತೆ ಕೆಲಸ ಮಾಡಲು ಸಂತೋಷವಾಗುತ್ತಿದೆ ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.