ಬೆಂಗಳೂರು(ಡಿ.05) ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ರಾಜ್ಯದ 15 ಕ್ಷೇತ್ರಗಳ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 9 ಗಂಟೆಯವರೆಗೆ ಕೆ.ಆರ್. ಪೇಟೆಯಲ್ಲಿ ಶೇ.6.20,

ಹುಣಸೂರು ಕ್ಷೇತ್ರ- ಶೇ 6.10, ಹೊಸಕೋಟೆ ಕ್ಷೇತ್ರ-ಶೇ 9.01, ಮಹಾಲಕ್ಷ್ಮೀ ಲೇಔಟ್-ಶೇ.8.2, , ರಾಣೆಬೆನ್ನೂರು-ಶೇ. 4.5, ಯಲ್ಲಾಪುರ-ಶೇ. 7.5, ಗೋಕಾಕ್-6.11, ಯಶವಂತಪುರ-ಶೇ 5, ಕೆ.ಆರ್. ಪೇಟೆ-ಶೇ. 6.20,

ವಿಜಯನಗರ -ಶೇ. 6.09, ರಷ್ಟು ಮತದಾನವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.