ನವದೆಹಲಿ(ಏ,14): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಮತ್ತು ಬಿ.ಎಸ್.ಪಿ ನಾಯಕಿ ಮಾಯಾವತಿ ಅವರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.

ಹೌದು ಲೋಕಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಇದ್ದು, ರಾಜಕೀಯ ನಾಯಕರ ಪ್ರಚಾರ ಬಿರುಸಿನ ವೇಗ ಪಡೆದುಕೊಂಡಿದೆ. ನೀತಿ ಸಂಹಿತೆ ಜಾರಿ ಇದ್ದರೂ ಕೂಡ ಪ್ರಚಾರ ಮಾಡುವಾಗ ಕೆಲ ನಾಯಕರು ಮನಬಂದಂತೆ ಮಾತನಾಡುವುದು ಸಾಮಾನ್ಯವಾಗಿದೆ.

ಹೀಗೆಯೇ ಮುಸಲ್ಮಾನ್ ಸಮುದಾಯ ಆರಾಧಿಸುವ ಅಲಿ ಮತ್ತು ಹಿಂದೂ ದೇವರಾದ ಭಜರಂಗಬಲಿ ವಿಚಾರವಾಗಿ ಯೋಗಿ ಆದಿತ್ಯನಾಥ್ ಮತ್ತು ಮಾಯಾವತಿ ನಡುವೆ ವಾಗ್ವಾದ ನಡೆದಿತ್ತು. ಇದನ್ನು ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಎಂದು ಪರಿಗಣಿಸಿರುವ ಆಯೋಗ, ಇಬ್ಬರೂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಬಾರದು ಎಂದು ಎಂದು ಆಯೋಗ ನಿರ್ಬಂಧ ಹೇರಿದೆ.