ಮುಂಬೈ(ಡಿ.24): ಬರ್ತಡೇ ಬಾಯ್ ಅನಿಲ್ ಕಪೂರ್ ತಮ್ಮ ಅಭಿನಯದ ಏಕ್ ಲಡ್ಕಿ ಕೋ ದೇಖಾ ತೊ ಐಸಾ ಲಗಾ ಸಿನಿಮಾದ ಟ್ರೆಲರ್ ಅನ್ನು ತಮ್ಮ ಟ್ವೀಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ಶೆಲ್ಲಿ ಚೋಪ್ರಾ ಧಾರ್ ನಿರ್ದೇಶನದ ಈ ಸಿನಿಮಾ ಫೆಬ್ರವರಿ 1, 2019 ರಂದು ಬಿಡುಗಡೆಯಾಗಲಿದೆ.

ಇನ್ನು ಮೂದಲ ಬಾರಿಗೆ ಮಗಳು ಸೊನಂ ಕಪೂರ್ ಜೊತೆ ಅನಿಲ್ ನಟಿಸುತ್ತಿದ್ದು, ಈ ಚಿತ್ರದಲ್ಲಿ ರಾಜ್ ಕುಮಾರ್ ರಾವ್ ಕೂಡ ತೆರೆ ಹಂಚಿಕೊಂಡಿದ್ದಾರೆ.

ಜನುಮ ದಿನದಂದು ಈ ಸಿನಿಮಾದ ಮೊದಲ ನೋಟವನ್ನು ಪ್ರಸ್ತುತ ಪಡಿಸಲು ಉತ್ಸುಕನಾಗಿದ್ದೇನೆ ಎಂದು ಬರೆದು ಈ ಸಿನಿಮಾದ ಮೊದಲ ನೋಟವನ್ನು ಬಿಡುಗಡೆಮಾಡಿದ್ದಾರೆ