ಬೆಂಗಳೂರು:(ಡಿ27): ಕಷ್ಟ ಪಟ್ಟು ಕೆಲಸ ಮಾಡಿದರೆ ನಿಜವಾಗಿಯೂ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬುದನ್ನು ಕೆಜಿಎಫ್ ಚಿತ್ರ ತಂಡ ತೋರಿಸಿಕೊಟ್ಟಿದೆ.

ಬಿಡುಗಡೆಯಾದ ದಿನದಿಂದ ಇದುವರೆಗೂ ದೇಶವಲ್ಲದೆ ವಿದೇಶದಲ್ಲಿಯೂ ಭಾರೀ ಮೆಚ್ಚುಗೆ ಪಡೆಯುತ್ತಿದ್ದು, ಈ ಮೆಚ್ಚುಗೆಯ ಹಿಂದಿರುವ ಶ್ರಮ ಮಾತ್ರ ಅದ್ಭುತವೇ. ಆ ಶ್ರಮ ಜೀವಿಗಳಿಗೆ ನಿಜಕ್ಕೂ ಒಂದು ಸಲಾಂ ಹೇಳಲೇ ಬೇಕು.

ಮಳೆ, ಸುಂಟರ ಗಾಳಿ ಬಂತಂದ್ರೆ ಚಿತ್ರತಂಡಕ್ಕೆ ನಡುಕ ಉಂಟಾಗ್ತಿತಂತೆ. ಗಂಟೆ-ಗಂಟೆಯಲ್ಲಿ ಚೇಂಜ್ ಆಗುವ ವೆದರ್ ಕಂಡೀಶನ್‍ನಲ್ಲಿ ಸೆಟ್‍ಗಳು ಉರುಳಿ ಬೀಳುತ್ತಿದ್ದವು.

ಸಿನಿಮಾದಲ್ಲಿ ಮಾರಿ ಜಾತ್ರೆಯ ದೃಶ್ಯ ಒಂದಿದ್ದು, ಅದ್ರಲ್ಲಿ ವಿಗ್ರಹದ ಸೆಟ್ ಹಾಗೂ ಕೊಳದ ಕ್ರಿಯೇಶನ್ ಕ್ರಿಯೇಟಿವಿಟಿಯಾಗಿ ಚಿತ್ರತಂಡ ಮಾಡಿರುತ್ತದೆ. ಈ ದೃಶ್ಯವನ್ನು ಸಂಜೆ ವೇಳೆ ಚಿತ್ರೀಕರಣ ಮಾಡಲಾಗಿತ್ತು. ಇಲ್ಲಿ ಬೆಂಕಿಯ ಜೊತೆಗೆ ಆಟವಾಡಿದ್ದು ನಿಜಕ್ಕೂ ಗ್ರೇಟೆ.

ಆದ್ರೂ ಗುರಿ ಮುಟ್ಟುವ ಕನಸು ನನಸಾಗುವ ಆಸೆ ಮಾತ್ರ ಚಿತ್ರತಂಡಕ್ಕಿತ್ತು. ಪದೇ-ಪದೇ ಉರುಳಿ ಬಿದ್ದ ಸೆಟ್‍ಗಳನ್ನು ಪುನಃ ಅದೇ ರೂಪಕ್ಕೆ ತರಬೇಕು ಅಂದ್ರೆ ನಿಜಕ್ಕೂ ಕಷ್ಟದ ಕೆಲಸವೇ.

ಆದ್ರೆ ಚಿತ್ರ ತಂಡ ಕಷ್ಟ ಎಂದು ಸ್ವೀಕರಿಸದೆ, ಇಷ್ಟ ಪಟ್ಟು ಖುಷಿ-ಖುಷಿಯಾಗಿ ಕೆಲಸ ಮಾಡಿದ ಫಲವೇ ಇಂದು ಕೆಜಿಎಫ್ ದೇಶದಾದ್ಯಂತ ಮೆಚ್ಚುಗೆ ಪಡೆಯಲು ಸಾಧ್ಯವಾಗಿದೆ.