ಮುಂಬೈ(ಫೆ:01): ಅವಕಾಶಗಳಿಲ್ಲದೇ ಫಾರ್ಮ್ ಕಳೆದುಕೊಂಡು ಮೂಲೆಗುಂಪಾದ ಕ್ರಿಕೆಟಿಗರು ಹಣಕ್ಕಾಗಿ ಪರದಾಡಬೇಕಾಗುತ್ತದೆ,ಈ ರೀತಿ ಹಣದ ಮುಗ್ಗಟ್ಟನ್ನು ಎದುರಿಸುವ ಯುವ ಕ್ರಿಕೆಟಿಗರ ನೆರವಿಗೆ ಇದೀಗ ರಾಹುಲ್ ದ್ರಾವಿಡ್ ಧಾವಿಸಿದ್ದಾರೆ.

ರಾಹುಲ್ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ಬಿಸಿಸಿಐ ಅಧಿಕಾರಿಗಳು ಕ್ರಿಕೆಟಿಗರಿಗೆ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಮಾಡಲು ನೆರವಾಗುವಂತಹಾ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ.

ಕ್ರಿಕೆಟ್ ಜೀವನದ ನಿವೃತ್ತಿಯ ನಂತರ ಎ ತಂಡದ ಕೋಚ್ ಆಗಿ ಭಾರತಕ್ಕೆ ಅತ್ಯುತ್ತಮ ಕ್ರಿಕೆಟಿಗರನ್ನು ಮಾಡುತ್ತಿರುವ ದ್ರಾವಿಡ್ ಹಲವಾರು ಬಾರಿ ಯುವ ಆಟಗಾರರಿಗೆ ನೇರವಾಗಿ ರಿಯಲ್ ಜೆಂಟಲ್ ಮ್ಯಾನ್ ಎನಿಸಿಕೊಂಡಿದ್ದಾರೆ,ಇದೀಗ ದ್ರಾವಿಡ್ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ.