ಚಿತ್ರದುರ್ಗ(ಆ:09): ಪಕ್ಷಾಂತರ ಮಾಡುವ ಶಾಸಕರು ಅಯೋಗ್ಯರು, ನೀಚರು ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೊರೆಸ್ವಾಮಿ ಅವರು, ಪಕ್ಷಾಂತರ ಮಾಡುವ ಶಾಸಕರಿಗೆ ಜನರ ಬಗ್ಗೆ, ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಪಕ್ಷದ ವಿರುದ್ಧವೂ ಹರಿಹಾಯ್ದ ಅವರು, ‘ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಆರೇಳು ಬಾರಿ ಗೆದ್ದವರನ್ನು ವ್ಯವಸ್ಥಿತವಾಗಿ ಸೋಲಿಸಲಾಗಿದೆ. ಕೆಲವರನ್ನು ಸೋಲಿಸಲೆಂದೇ ಮತಯಂತ್ರವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಐದು ವರ್ಷಗಳ ನಂತರ ಲೋಕಪಾಲವನ್ನು ಅಸ್ಥಿತ್ವಕ್ಕೆ ತಂದಿರುವ ಮೋದಿ ಅವರು, ಬೆದರುಗೊಂಬೆಯೊಂದನ್ನು ನೆಟ್ಟಿದ್ದಾರೆ. ದೇಶದಕ್ಕೆ ತುರ್ತಾಗಿ ಕ್ವಿಟ್ ಇಂಡಿಯಾ ಮಾದರಿಯ ಹೋರಾಟವೊಂದರ ಅವಶ್ಯಕತೆ ಇದೆ. ಆಗಸ್ಟ್‌ 14 ರಂದು ಮಧ್ಯರಾತ್ರಿ ಧ್ವಜಾರೋಹಣ ಮಾಡಿ ಚಳುವಳಿಗೆ ಪ್ರಾರಂಭ ಮಾಡುತ್ತೇವೆ ಎಂದು ದೊರೆಸ್ವಾಮಿ ಹೇಳಿದರು.