ಬೆಂಗಳೂರು:(ಜ02): ನಟ ಸತೀಶ್ ನೀನಾಸಂ ನಿರ್ದೇಶನದ ಹೊಸ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಹೊಸ ಚಿತ್ರಕ್ಕೆ “ಮೈ ನೇಮ್ ಇಸ್ ಸಿದ್ದೇಗೌಡ” ಎಂಬ ಶೀರ್ಷಿಕೆ ಇಡಲಾಗಿದೆ.

ಈ ಚಿತ್ರವು ಸತೀಶ್ ಪಿಕ್ಚರ್ ಹೌಸ್ ಹಾಗೂ ಲೀಡರ್ ಫಿಲ್ಮ್ ಪ್ರೊಡಕ್ಷನಲ್ಲಿ ನಿರ್ಮಾಣವಾಗಲಿದೆ.

ಇದು ರೊಮ್ಯಾಂಟಿಕ್ ಕಾಮಿಡಿ ಇರುವ ಚಿತ್ರವಾಗಿದೆ. ಮಾರ್ಚ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಮಂಡ್ಯದ ಶೈಲಿಯಲ್ಲಿ ಕಥೆ ಸಾಗಲಿದ್ದು, ಬೇರೆ ರೀತಿಯ ಶೈಲಿಯ ನಿರೂಪಣೆಯಿದ್ದು, ಸಿದ್ದೇಗೌಡ ಎಂಬುವವನು ಧರ್ಮ, ಜಾತಿ, ಗಡಿ ಮೀರಿ ಹೇಗೆ ಬೆಳೆಯುತ್ತಾನೆ ಎಂಬ ಕಥೆಯನ್ನಾಧರಿಸಿದೆ ಎಂದಿದ್ದಾರೆ ನಟ ನಿರ್ದೇಶಕರಾದ ಸತೀಶ್ ನೀನಾಸಂ.