ಫೆಬ್ರವರಿ 16 ಚಾಲೆಂಜಿಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ. ಆ ದಿನ ದರ್ಶನ್ ಅಭಿಮಾನಿಗಳಿಗೆ ಸಂಭ್ರಮ ಸಡಗರದ ದಿನ. ಆದ್ರೆ ಈ ಬಾರಿ ಸರಳ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ದಚ್ಚು.

ಈ ಬಾರಿ ಚಂದನವನದ ದೊಡ್ಡ ಹೂವೊಂದು ಮುದುಡಿ ಹೋಗಿದೆ. ಅಂದ್ರೆ ರೆಬೆಲ್‍ಸ್ಟಾರ್ ಅಂಬಿಯ ಅಗಲಿಕೆ. ಅಂಬಿ ಅಗಲಿ ಒಂದುವರೆ ತಿಂಗಳೆ ಕಳೆದಿದೆ. ಆದ್ರೆ ಅಗಲಿಕೆಯ ದುಃಖ ಮಾತ್ರ ಕಡಿಮೆಯಾಗಿಲ್ಲ.

ದರ್ಶನ್ ಪಾಲಿಗೆ ಅಂಬಿ ಅಪ್ಪಾಜಿಯಾಗಿದ್ರು. ಅಪ್ಪಾಜಿಯ ಅಗಲಿಕೆಯ ದುಃಖದಿಂದ ದಚ್ಚು ಇನ್ನೂ ಹೊರ ಬರಲಿಲ್ಲ. ಈ ದುಃಖದ ಮದ್ಯೆಯೇ ಅವರ ಹುಟ್ಟು ಹಬ್ಬದ ದಿನ ಹತ್ತಿರವಾಗ್ತಾಯಿದೆ.

ಇದ್ರಿಂದ ದರ್ಶನ್ ಅಭಿಮಾನಿಗಳಲ್ಲಿ ಸರಳ ಹುಟ್ಟು ಹಬ್ಬ ಆಚರಿಸುವ ಬಗ್ಗೆ ವಿನಂತಿಸಿಕೊಂಡಿದ್ದಾರೆ. ಪ್ರತಿ ವರ್ಷವು ನನ್ನ ಹುಟ್ಟು ಹಬ್ಬವನ್ನು ನಿಮ್ಮ ಹುಟ್ಟು ಎನ್ನುವಂತೆ ಸಂಭ್ರಮಿಸುವುದು, ನನ್ನ ಯಾವುದೋ ಜನ್ಮದ ಪುಣ್ಯ ಆದ್ರೆ ಈ ವರ್ಷ ಅಂಬಿ ಅಪ್ಪಾಜಿ ನಮ್ಮನ್ನು ಅಗಲಿ ದೂರವಾಗಿದ್ದಾರೆ. ಇದರಿಂದ ಬ್ಯಾನರ್ ಕೇಕ್ ಹಾರಗಳನ್ನು ಯಾರೂ ತರಬೇಡಿ. ಅದಕ್ಕೆ ಖರ್ಚು ಮಾಡುವ ಹಣವನ್ನು ನಿಮ್ಮೂರಿನಲ್ಲಿರುವ ಅನಾಥಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಡಿ ಎಂದು ದರ್ಶನ್ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.