ಮುಂಬೈ(ಜುಲೈ.10) ರಾಜ್ಯ ರಾಜಕಾರಣ ದೇಶದೆಲ್ಲೆಡೆ ಭಾರೀ ಕುತೂಹಲವನ್ನು ಮೂಡಿಸಿದ್ದು, ಈಗಾಗಲೇ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್​- ಜೆಡಿಎಸ್​ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಹೊಸ ಸಂಪುಟ ರಚಿಸಿ, ಅತೃಪ್ತ ಶಾಸಕರಿಗೆ ಮಂತ್ರಿಗಿರಿ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಮುಂಬೈನಲ್ಲಿರುವ ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ನಿರ್ಧಾರ ಬದಲಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ.

ಕಳೆದ 6 ಗಂಟೆಯಿಂದ ಅತೃಪ್ತ, ಬಂಡಾಯ ಶಾಸಕರು, ರಾಜೀನಾಮೆ ನೀಡಿ ಹೋಟೆಲ್ ನಲ್ಲಿ ಉಳಿದಿರುವ ರಿನೈಸೆನ್ಸ್ ಹೋಟೆಲ್ ಮುಂದೆ ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಿಗ್ಗೆಯಿಂದ ಅತೃಪ್ತರು ತಂಗಿದ್ದ ಮುಂಬೈನ್ ರಿನೈಸೆನ್ಸ್ ಹೋಟೆಲ್ ಗೆ ತಾವು ರೂಂ ಬುಕ್ ಮಾಡಿರುವುದಾಗಿ ತೆರಳಿ, ಆ ಮೂಲಕ ಬಂಡಾಯ, ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದ, ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಅವರನ್ನು ಬಂಧಿಸಿ, ಕರೆದೊಯ್ದಿದ್ದಾರೆ.

ಈ ಮೊದಲು ರಾಜೀನಾಮೆಯನ್ನು ನೀಡಿರುವಂತಹ ಶಾಸಕರು ಡಿ.ಕೆ. ಶಿವಕುಮಾರ್ ರಿಂದ ನಮಗೆ ನಮಗೆ ಬೆದರಿಕೆ ಇದೆ ನಮಗೆ ರಕ್ಷಣೆಯನ್ನು ನೀಡಿ ಎಂದು ಶಾಸಕರು ಮುಂಬೈ ಪೊಲೀಸ್ ಕಮೀಷನರ್ ಗೆ ಪತ್ರವನ್ನು ಬರೆದಿದ್ದರು.