ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖಾನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೋಯ್, ನ್ಯಾಯಾಧೀಶರುಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬಡೆ, ಎನ್.ವಿ.ರಮಣ್ ಮತ್ತು ಅರುಣ್ ಮಿಶ್ರಾ ಸೇರಿದಂತೆ ಐವರು ಸದಸ್ಯರ ಕೊಲಿಜಿಯಂ ಜನವರಿ 10ರಂದು ಜಸ್ಟೀಸ್ ಮಹೇಶ್ವರಿ ಮತ್ತು ಜಸ್ಟೀಸ್ ಖನ್ನಾ ಅವರಿಗೆ ಪದೋನ್ನತಿ ನೀಡಿ ನ್ಯಾಯಾಧೀಶ ಸ್ಥಾನ ನೀಡಲು ಶಿಫಾರಸು ಮಾಡಿತ್ತು. ಇದಕ್ಕೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅಂಕಿತ ಹಾಕಿದ್ದರು