ನವದೆಹಲಿ(ಫೆ:06): ಇ ಪಿ ಎಫ್(ಕಾರ್ಮಿಕ ಭವಿಷ್ಯ ನಿಧಿ) ಹಾಗೂ ಪಿ ಪಿ ಎಫ್(ಸಾರ್ವಜನಿಕ ಭವಿಷ್ಯ ನಿಧಿ) ಇವೆರಡೂ ನಿವೃತ್ತಿಯ ನಂತರದ ಜೀವನೋಪಾಯಕ್ಕಾಗಿ ನಿಧಿ ಸಂಗ್ರಹಿಸುವ ಎರಡು ಯೋಜನೆಗಳಾಗಿವೆ. ಸುರಕ್ಷತೆ ಹಾಗೂ ಆದಾಯದ ಖಾತರಿಗಳ ಕಾರಣಗಳಿಂದಾಗಿ ಇವರಡೂ ನಿವೃತ್ತಿ ಫಂಡ್ ಯೋಜನೆಗಳಲ್ಲಿ ಭಾರತದಲ್ಲೇ ಅತಿ ಹೆಚ್ಚು ಜನಪ್ರಿಯತೆ ಗಳಿಸಿವೆ.

ಹೂಡಿಕೆ ಮಾಡುವ ಮುನ್ನ ಇವೆರಡರ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು,ಇ ಪಿ ಎಫ್ ಹಾಗೂ ಪಿ ಪಿ ಎಫ್ ನಡುವಿನ ಮುಖ್ಯ ವ್ಯತ್ಯಾಸಗಳು ಹೀಗಿವೆ:

1. ಅರ್ಹತೆಗಳು
ಇ ಪಿ ಎಫ್ ಯೋಜನೆಯಲ್ಲಿ ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳು ಮಾತ್ರ ಸದಸ್ಯರಾಗಬಹುದು,20ಕ್ಕೂ ಹೆಚ್ಚು ನೌಕರರು ಇರುವ ಕಂಪನಿಗಳ ನೌಕರರರು ಹಾಗೂ ನಿಗದಿತ ಮಿತಿಗಿಂತಲೂ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳು ಇ ಪಿ ಎಫ್ ಮಾಡಿಸುವುದು ಕಡ್ಡಾಯವಾಗಿದೆ.

ಪಿ ಪಿ ಎಫ್ ಅನ್ನು ಬ್ಯಾಂಕ್ ಹಾಗೂ ಅಂಚೆ ಕಚೇರಿ ಶಾಖೆಗಳು ನಿರ್ವಹಿಸುತ್ತಿದ್ದು, ಸಂಬಳ ಪಡೆಯುವವರು ಹಾಗೂ ನೌಕರಿ ಮಾಡದೇ ಇರುವವರು ಸಹ ಇದರ ಸದಸ್ಯರಾಗಬಹುದು.

2. ಬಡ್ಡಿ ದರ
ಪ್ರತಿ ವರ್ಷ ಇ ಪಿ ಎಫ್ ಓ,ಇ ಪಿ ಎಫ್ ಬಡ್ಡಿ ದರವನ್ನು ಪ್ರಕಟಿಸುತ್ತದೆ,2017-18ನೇ ಸಾಲಿನಲ್ಲಿ ಈ ದರವನ್ನು ಶೇ.8.55 ಎಂದು ಘೋಷಿಸಲಾಗಿದೆ.

ಪಿ ಪಿ ಎಫ್ ಯೋಜನೆಯು ಸರ್ಕಾರದ ಹತ್ತು ವರ್ಷಗಳ ಬಾಂಡ್ ಯೋಜನೆಯ ಆದಾಯವನ್ನು ಆಧರಿಸಿದೆ. ಕೇಂದ್ರ ಸರ್ಕಾರ ಪ್ರತಿ ತ್ರೈಮಾಸಿಕಕ್ಕೊಮ್ಮೆ ಬಡ್ಡಿ ದರವನ್ನು ಘೋಷಿಸುತ್ತದೆ. 2018-19 ರ ತ್ರೈಮಾಸಿಕಕ್ಕಾಗೆ ಶೇ.8 ರಷ್ಟು ಬಡ್ಡಿ ದರ ನಿಗದಿಪಡಿಸಿದೆ.