ಹ್ಯಾಮಿಲ್ಟನ್(ಫೆ:11): ಟೀಮ್ ಇಂಡಿಯಾದ ಅನುಭವಿ ಆಟಗಾರ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಟಿ 20 ಪಂದ್ಯವನ್ನಾಡಿ ಮತ್ತೊಂದು ವಿನೂತನ ದಾಖಲೆ ಬರೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ 3ನೆೇ ಟಿ 20 ಪಂದ್ಯವನ್ನು ಆಡುವ ಮೂಲಕ ಟಿ 20 ಪಂದ್ಯದಲ್ಲಿ 300ನೆೇ ಪಂದ್ಯವನ್ನಾಡಿದ್ದಾರೆ.

ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತದ ಆಟಗಾರ ಎನಿಸಿಕೊಂಡಿದ್ದಾರೆ. ಇದರಲ್ಲಿ ದೇಶೀಯ ಕ್ರಿಕೆಟ್ ಲೀಗ್ ಸೇರಿದಂತೆ ಎಲ್ಲಾ ಟಿ 20 ಮಾದರಿಯ ಪಂದ್ಯಗಳು ಒಳಗೊಂಡಿವೆ.

ಇನ್ನು ರೋಹಿತ್ ಶರ್ಮ 298,ಸುರೇಶ್ ರೈನಾ 296,ದಿನೇಶ್ ಕಾರ್ತಿಕ್ 260,ಗಂಭೀರ್ ಹಾಗೂ ಹರ್ಭಜನ್ 251,ವಿರಾಟ್ ಕೊಹ್ಲಿ 250 ಪಂದ್ಯಗಳನ್ನಾಡಿ ನಂತರದ ಸ್ಥಾನದಲ್ಲಿದ್ದಾರೆ.