ರಾಂಚಿ(ಫೆ:14): ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ನ ರಾಂಚಿಯ ಕ್ರಿಕೆಟ್ ಮೈದಾನದಲ್ಲಿ ಧೋನಿಯ ಹೆಸರು ಅಜರಾಮರವಾಗಿ ಉಳಿಯಲಿದೆ. ರಾಂಚಿ ಧೋನಿಯ ಹುಟ್ಟೂರು,ಇದೀಗ ಹುಟ್ಟೂರಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೌತ್ ಸ್ಟ್ಯಾಂಡ್ ಗೆ ಧೋನಿ ಹೆಸರಿಡಲಾಗಿದೆ.

‘ಎಂ ಎಸ್ ಧೋನಿ ಪೆವಿಲಿಯನ್’ ಎಂದು ನಾಮಕರಣ ಮಾಡಲಾಗಿದೆ,ಇದೀಗ ಕ್ರಿಕೆಟ್ ನಲ್ಲಿ ಖ್ಯಾತಿ ಗಳಿಸಿರುವ ತಮ್ಮ ತವರಿನ ಆಟಗಾರನಿಗೆ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಗೌರವ ಸಲ್ಲಿಸಿದೆ. ಈಗಾಗಲೇ ಧೋನಿ ಹೆಸರನ್ನು ಬರೆಸಲಾಗಿದೆ. ಅದರ ಅಧಿಕೃತ ಉದ್ಘಾಟನೆ ಆಗಬೇಕಿದೆ.