ಮುಂಬೈ(ಏ:04): ಮಹೇಂದ್ರ ಸಿಂಗ್ ಧೋನಿ ಓರ್ವ ಶ್ರೇಷ್ಠ ಆಟಗಾರ, ಆತನ ಜೊತೆಗೆ ಯಾರನ್ನೂ ಹೋಲಿಕೆ ಮಾಡುವುದು ಸರಿಯಲ್ಲ, ಅವರ ಶ್ರೇಷ್ಠತೆಯನ್ನೇರುವುದು ಯಾರಿಗೂ ಸಾಧ್ಯವಿಲ್ಲ ಎಂದು ಮಾಜಿ ಆಟಗಾರ ಕಪಿಲ್ ದೇವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಧೋನಿಯ ಜೊತೆ ಹೋಲಿಸುತ್ತರುವುದನ್ನು ಕಂಡು ಕಪಿಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ರಿಷಬ್ ಪಂತ್ ನಿಜವಾಗಿಯೂ ಒಬ್ಬ ಪ್ರತಿಭಾನ್ವಿತ ಆಟಗಾರ, ಆದರೆ ಆತನನ್ನು ಮಹೇಂದ್ರಸಿಂಗ್ ಧೋನಿಯ ಜೊತೆ ತುಲನೆ ಮಾಡುವುದು ಸರಿಯಲ್ಲ ಎಂದು ಕಪಿಲ್ ತಿಳಿಸಿದ್ದಾರೆ.

ಪಂತ್ ಅವರನ್ನು ಧೋನಿಗೆ ಹೋಲಿಸುವುದರಿಂದ ಪಂತ್ ಮೇಲೆ ಒತ್ತಡ ಬೀಳುತ್ತದೆ. ಪಂತ್ ಕೂಡಾ ಒಂದು ದಿನ ದೊಡ್ಡ ಮಟ್ಟದ ಆಟಗಾರನಾಗಿ ರೂಪುಗೊಳ್ಳುತ್ತಾನೆ, ಅವನ ಸಮಯ ಖಂಡಿತವಾಗಿಯೂ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.