ಧಾರವಾಡ(ಜ03): ವಿದ್ಯಾನಗರಿ ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ದಿನ ಉಳಿದಿದ್ದು, ನುಡಿ ಜಾತ್ರೆಯ ಹಿನ್ನೆಲೆ ಧಾರವಾಡದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಡಾ. ಚಂದ್ರಶೇಖರ್ ಕಂಬಾರ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸಾಂಪ್ರದಾಯಿಕ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ,
ವಿವಿಧ ಜಿಲ್ಲೆಗಳಿಂದ ಜಾನಪದ ಕಲಾತಂಡಗಳು 700ಕ್ಕಿಂತ ಹೆಚ್ಚು ಕಲಾವಿದರು,15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧವೆಯರು, ಮಹಿಳೆಯರು,ಮಂಗಳಮುಖಿಯರನ್ನು ಒಳಗೊಂಡಂತೆ ಒಟ್ಟು 1001 ಮಂದಿ ಪೂರ್ಣಕುಂಭ ಮೆರವಣಿಗೆಯಲ್ಲಿ ಭಾಗವಹಿಸುವುದು ವಿಶೇಷವಾಗಿದೆ.

500 ಪುಸ್ತಕ ಹಾಗೂ 250 ವಾಣಿಜ್ಯ ಮಳಿಗೆ ತೆರೆಯಲಾಗಿದ್ದು,ವಿದ್ಯಾವರ್ಧಕ, ರಂಗಾಯಣ ಸೇರಿ ಒಟ್ಟು 6 ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಪ್ರತಿನಿಧಿಗಳಿಗಾಗಿ ಹಾಗೂ ಗಣ್ಯರಿಗಾಗಿ ಒಟ್ಟು 250 ಬಸ್ ಗಳನ್ನು ಕಾಯ್ದಿರಿಸಲಾಗಿದ್ದು,ಸಾರ್ವಜನಿಕರನ್ನು ಉಚಿತವಾಗಿ ಕರೆತರಲು ಬಸ್ ನಿಲ್ದಾಣ,ರೈಲು ನಿಲ್ದಾಣ ಸೇರಿದಂತೆ ವಿವಿದೆಡೆಗೆ ಒಟ್ಟು 50 ಬಸ್ ವ್ಯವಸ್ಥೆ ಮಾಡಲಾಗಿದೆ,ಅಷ್ಟೇ ಅಲ್ಲದೇ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಪ್ರವಾಸದ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ.