ಬೆಂಗಳೂರು (ಮೇ 31) : ನೊಂದವರ ಕಣ್ಣೀರು ಒರೆಸುವಾಗ ಪೊಲೀಸರಿಗೆ ಸಿಗುವ ಸಮಾಧಾನ ಎಲ್ಲದಕ್ಕಿಂತಲೂ ಮಿಗಿಲಾದುದು. ರಾಜ್ಯ ಪೊಲೀಸ್ ಇಲಾಖೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಪೊಲೀಸ್ ಸೇವೆಯಿಂದ ಇಂದು ನಿವೃತ್ತರಾದ ಡಿಜಿಪಿ ಕಿಶೋರ್ ಚಂದ್ರ ತಿಳಿಸಿದ್ದಾರೆ.

ನಗರದ ಕೊರಮಂಗಲದಲ್ಲಿನ ಕೆಎಸ್ ಆರ್ ಪಿ ಪರೇಡ್ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಕಿಶೋರ್ ಚಂದ್ರ ಹಗಲು ರಾತ್ರಿ ಎನ್ನದೆ ಚಳಿ, ಮಳೆ ಬಿಸಿಲು ಲೆಕ್ಕಿಸದೆ, ಹಬ್ಬ ಹರಿದಿನ ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಕೆಲಸ ಮಾಡುವ ಪೊಲೀಸರು ಸಾರ್ವಜನಿಕರಿಂದ ನಂಬಿಕೆ ಗಳಿಸಲು ಸಾಧ್ಯವಾಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಪೊಲೀಸರ ಮೇಲೆ ಗೂಬೆ ಕೂರಿಸುವ ಕುತಂತ್ರಗಳು ನಡೆಯುತ್ತವೆ. ಹೀಗಾಗಿ ಮೊದಲು ಪೊಲೀಸರು ನಂಬಿಕೆಗೆ ಪಾತ್ರರಾಗುವ ಅವಶ್ಯಕತೆ ಇದೆ ಎಂದು ಕಿಶೋರ್ ಚಂದ್ರ ತಿಳಿದ್ದಾರೆ.

ಕಾರ್ಯಕ್ರಮದಲ್ಲಿ ಡಿಜಿ ಮತ್ತು ಐಜಿಪಿ ನೀಲಮಣಿರಾಜು ಅವರು ಮಾತಾನಾಡಿ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಇಂದು ನಿವೃತ್ತರಾಗುತ್ತಿರುವ ಕಿಶೋರ್ ಚಂದ್ರರವರು ದಕ್ಷ, ಪ್ರಮಾಣಿಕ, ಸ್ನೇಹಮಹಿ ಅಧಿಕಾರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಬಿಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದ ಎಡಿಜಿಪಿ ಭಾಸ್ಕರ್ ರಾವ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂ.ಎನ್ ರೆಡ್ಡಿ, ಪಿಕೆ ಗರ್ಗ್ ಮತ್ತಿತರ ಅಧಿಕಾರಿಗಳು ಕಿಶೋರ್ ಚಂದ್ರ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದ್ದಾರೆ.