ಬೆಂಗಳೂರು(ಫೆ. 12): ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲ ನಡೆಸಿರುವ ಸಂಪೂರ್ಣ ಆಡಿಯೋ ಒಂದು ಬಹಿರಂಗವಾಗಿದೆ.

ಇದರಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಮಾಜಿ ಪ್ರಧಾನಿ ದೇವೇಗೌಡರು ಇನ್ನೇನು ಸಾಯುತ್ತಾರೆ, ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ ಜೆಡಿಎಸ್ ಕಥೆ ಫಿನೀಶ್ ಎಂದು ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶ ಗೊಂಡಿರುವ ಜೆಡಿಎಸ್ ಕಾರ್ಯಕರ್ತರು, ಹಾಸನದ ವಿದ್ಯಾನಗರದಲ್ಲಿರುವ ಶಾಸಕ ಪ್ರೀತಮ್ ಗೌಡರ ಮನೆ ಮುತ್ತಿಗೆಗೆ ಯತ್ನಿಸಿದ್ದು ಅಲ್ಲದೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಬಿಜೆಪಿ ಮುಖಂಡನೋರ್ವನಿಗೆ ಗಂಭೀರ ಗಾಯಾಗಳಾಗಿವೆ.

ಇನ್ನು ಪ್ರೀತಮ್ ಗೌಡ ಮನೆ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.