ಬೆಂಗಳೂರು: ಈ ದೇವೆಗೌಡ ಮತ್ತು ಕುಮಾರಸ್ವಾಮಿ ಅವರು ಯಾವತ್ತೂ ಅಧಿಕಾರದ ಹಿಂದೆ ಹೊಗಿಲ್ಲ ಹೋಗೋದು ಇಲ್ಲಾ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಹೇಳಿದ್ದಾರೆ. ಆಕಸ್ಮಿಕವಾಗಿ ಪ್ರಧಾನ ಮಂತ್ರಿಯಾದೆ, ನಾನು ಯಾರ ಬಗ್ಗೆಯು ಲಘುವಾಗಿ ಮಾತನಾಡೋದಿಲ್ಲ ಎಂದಿದ್ದಾರೆ.

ಪಕ್ಷದ ಅಲ್ಪಸಂಖ್ಯಾತರ ಘಟಕ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಹಿಂದು ನಾನು ಎಲ್ಲ ದೇವಸ್ಥಾನಕ್ಕೆ ಹೊಗಿದ್ದೇನೆ, ಅಜ್ಮೀರ್ ಗೆ ಹೊಗಿದ್ದೇನೆ, ಗೋಲ್ಡನ್ ಟೆಂಪಲ್ ಗೂ ಹೋಗಿದ್ದೀನಿ. ಅಧಿಕಾರದ ಬೆನ್ನತ್ತಿ ಹೊಗೋ ದೇವೆಗೌಡ ನಾನಲ್ಲ. ದೇಶಕ್ಕೆ ಒದಗಿರೊ ಗಂಡಾಂತರ ಹೇಗೆ ಸರಿಪಡಿಸಬೇಕು ಅನ್ನೊ ಬಗ್ಗೆ ಪ್ರತಿ ಕ್ಷಣ ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಯಾರ ಬಗ್ಗೆಯೂ ದ್ವೇಷ ಇಲ್ಲ, ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಮುರಿಯುವುದಿಲ್ಲ. ನಮ್ಮ ಜೊತೆ ಕಾಂಗ್ರೆಸ್ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಾರೆ. ಅದರ ಬಗ್ಗೆ ನಾನು ಮಾತನಾಡೋದಿಲ್ಲ. ಎಲ್ಲರ ಮನಸ್ಸಿನಲ್ಲಿ ನಾವು ಭಾರತೀಯ ಜಾನತ ಪಾರ್ಟಿ ಜೊತೆ ಹೋಗಿದ್ವಿ ಅನ್ನೋ ಭಾವನೆ ಇದೆ. ನಮ್ಮ ಶಾಸಕರು, ಸಚಿವರು ಯಾರೂ ಮೈತ್ರಿ ಸರ್ಕಾರಕ್ಕೆ ದಕ್ಕೆ ತರದಂತ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.