ಬೆಂಗಳೂರು:(ಜ14): ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ವಿದೇಶಿ ನೋಟುಗಳು ಪತ್ತೆಯಾಗಿವೆ.

ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬ ಇಂಡೋನೇಷ್ಯಾದ ಪಾಸ್‍ಪೋರ್ಟ್ ಹೊಂದಿದ್ದು, ಬ್ಯಾಂಕಾಕ್‍ಗೆ ಪ್ರಯಾಣಿಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಆತನÀ ಮೇಲೆ ಅನುಮಾನ ಬಂದ ಕಾರಣ ಪೋಲಿಸರು ಪರಿಶೀಲನೆ ನಡೆಸಿದಾಗ ವಿದೇಶಿ ಅಕ್ರಮ ಹಣ ಪತ್ತೆಯಾಗಿದೆ. ಒಟ್ಟು 2.09 ಕೋಟಿ ರೂ ಮೌಲ್ಯದ ನೋಟು ಪತ್ತೆಯಾಗಿದ್ದು, 14 ದೇಶದ ನೋಟುಗಳು ಸಿಕ್ಕಿವೆ. ಆರೋಪಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.