ನವದೆಹಲಿ(ಫೆ.14): ದೆಹಲಿ ಮುಖ್ಯಮಂತ್ರಿಗಳೇ ಪ್ರಧಾನಿಗಿಂತ ಹೆಚ್ಚು ಶಿಕ್ಷಣ ಪಡೆದಿದ್ಧಾರೆ ಆದ್ದರಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮೋದಿಗಿಂತ ಉತ್ತಮ ಪ್ರಧಾನಿ ಆಗಬಲ್ಲರು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್ ತಾವು ತಮ್ಮ ಶಿಕ್ಷಣ ಪದವಿಯನ್ನು ಎಲ್ಲಿ ಪಡೆದರು ಎಂಬುದಕ್ಕೆ ದಾಖಲೆಯಿದೆ. ಹಾಗೆಯೇ ನಾನು ಕೂಡ ಶಿಕ್ಷಣ ಎಲ್ಲಿ ಪಡೆದಿದ್ದೇನೆ ಎಂದು ಹೇಳಬಲ್ಲೇ. ಆದರೆ, ಪ್ರಧಾನಿ ಮೋದಿಜೀ ಎಲ್ಲಿ ಶಿಕ್ಷಣ ಪಡೆದಿದ್ದಾರೆಂದು ಗೊತ್ತಿದೆಯೇ? ಅದಕ್ಕೆ ಏನಾದರೂ ದಾಖಲೆಗಳು ಇದೆಯೇ ಎಂದು ಪ್ರಶ್ನಿಸಿದ ಅವರು ಕೇಜ್ರಿವಾಲ್ ಮೋದಿಯವರಿಗಿಂತ 1000 ಪಟ್ಟು ಉತ್ತಮ ಎಂದಿದ್ದಾರೆ.

ಇನ್ನು ಈ ಹಿಂದೆ ಪ್ರಧಾನಿ ಮೋದಿಯವರು ಚಂದ್ರಬಾಬು ನಾಯ್ಡು ಅವರಿಗೆ ಮಿತ್ರರನ್ನು ವಂಚಿಸುವುದು ಮೊದಲೇನಲ್ಲ ತೆಲುಗು ದೇಶಂ ಪಕ್ಷವನ್ನೇ ಕಟ್ಟಿ ಬೆಳಸಿದ ಸ್ವಂತ ಕುಟುಂಬವನ್ನೇ ಬೀದಿಗೆ ತಳ್ಳಿದ್ದಾರೆ. ಪ್ರತಿಬಾರಿ ತಾನು ರಾಜಕೀಯದಲ್ಲಿ ನನಗಿಂತ ಹಿರಿಯ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದ್ದರು.