ರಾಯಚೂರು(ಜ:05): 2019-20ನೆೇ ಸಾಲಿನ ಬಜೆಟ್ ಮಂಡನೆಯನ್ನು ಫೆಬ್ರವರಿಯಲ್ಲಿ ಮಾಡಲಾಗುವುದು, ಅದರಲ್ಲಿ ರಾಜ್ಯ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಿಂಧನೂರಿನಲ್ಲಿ ರಾಜ್ಯಮಟ್ಟದ ಮತ್ಸ್ಯ ಮತ್ತು ಜಾನುವಾರು ಮೇಳ ಉದ್ಘಾಟಿಸಿ ಮಾತನಾಡಿದ ಅವರು ಸಾಲಮನ್ನಾ ಮಾಡುವ ಸಲುವಾಗಿ ಪ್ರತ್ಯೇಕ ಹಣ ತೆಗೆದಿಡಿಸಲಾಗಿದೆ ಎಂದರು.

ರಾಜ್ಯದ ರೈತರ ಪರಿಸ್ಥಿತಿ ಅರ್ಥಮಾಡಿಕೊಂಡಿದ್ದೇನೆ,ಸ್ವಲ್ಪ ಸಮಯಾವಕಾಶ ಕೊಡಿ ಇಡೀ ಆರೂವರೆ ಕೋಟಿ ಜನರ ಸಮಸ್ಯೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.