ದೆಹಲಿ(ಡಿ.23) ಇಂದು ರಾಷ್ಟ್ರೀಯ ರೈತ ದಿನ. ಪ್ರತಿಯೊಬ್ಬರೂ ತುತ್ತು ತಿನ್ನುವ ಮೊದಲು ರೈತರನ್ನು ನೆನೆಯಬೇಕು. ರೈತನೊಬ್ಬ ದುಡಿಯದಿದ್ದರೆ ದೇಶದ ಜನತೆ ಉಪವಾಸ ಕೂರಬೇಕಾಗುತ್ತದೆ. ರೈತ ದೇಶದ ಬೆನ್ನೆಲುಬು.

ಪ್ರತಿಯೊಬ್ಬರೂ ಇಂದು ಹೊಟ್ಟೆ ತುಂಬಾ ಊಟ ಮಾಡಿ ಹಸಿವಿಲ್ಲದೆ ನಿಶ್ಚಿಂತೆಯಿಂದ ಮಲಗಲು ಕಾರಣ ರೈತ. ಗದ್ದೆಯ ಕೆಸರನ್ನು ತುಳಿದು, ಗದ್ದೆಯಲ್ಲಿರುವ ಕಸಕಡ್ಡಿಯನ್ನು ತೆಗೆದು, ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಸಿಲಲ್ಲಿ ಬೆಂದು, ಮಳೆ, ಚಳಿ, ಬಿಸಿಲೆನ್ನದೆ ಹೊಲ, ಗದ್ದೆಯಲ್ಲಿ ದುಡಿದು ಗದ್ದೆಗಳಿಗೆ ಹಸಿರುಣಿಸಿ ಕೊನೆಗೆ ನಮಗೆ ಅಮೃತವನ್ನು ಹುಣಬಡಿಸುವವನು ರೈತ. ಯಾರೊಬ್ಬರಿಗೂ ಕೇಡು ಬಗೆಯದಿರುವವನು ರೈತ.

ಈ ರೈತರ ದಿನವನ್ನು ಭಾರತದಲ್ಲಿ ಡಿಸೆಂಬರ್ 23ರಂದು ಆಚರಣೆ ಮಾಡಿದರೆ, ಅಮೆರಿಕಾದಲ್ಲಿ ಅಕ್ಟೋಬರ್ 12ರಂದು ಆಚರಣೆ ಮಾಡಲಾಗುತ್ತದೆ.