ನವದೆಹಲಿ(ಫೆ:11): ಉತ್ತರಪ್ರದೇಶದ ಸಹಾರಣ್‌ಪುರ ಹಾಗೂ ಉತ್ತರಾಖಂಡದ ಹರಿದ್ವಾರ್ ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ಬಲಿಯಾದವರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ. ಉತ್ತರಪ್ರದೇಶದ ಸಹಾರಣ್‌ಪುರದಲ್ಲಿಕಳ್ಳಭಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿದೆ.

ಉತ್ತರಾಖಂಡದಲ್ಲಿ 36 ಮಂದಿ ಬಲಿಯಾಗಿದ್ದಾರೆ ಮತ್ತು ಪೂರ್ವ ಉತ್ತರ ಪ್ರದೇಶದ ಕುಶೀನಗರದಲ್ಲಿ ಈ ವರೆಗೆ 10 ಮಂದಿ ಮೃತಪಟ್ಟಿದ್ದಾರೆ. ಜನರು ಪ್ರಾಣ ಕಳೆದುಕೊಳ್ಳಲು ಆಡಳಿತದಲ್ಲಿರುವ ಬಿಜೆಪಿ ಪಕ್ಷವೇ ನೇರ ಕಾರಣ ಎಂದು ಸಮಾಜವಾದಿ ಪಕ್ಷ ಮತ್ತು ಬಿ ಎಸ್ ಪಿ ದೂಷಿಸಿದರೆ, ಈ ದುರಂತಕ್ಕೆ ಸಮಾಜವಾದಿ ಪಕ್ಷದ ಸಂಚಿರಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.