ಬೆಂಗಳೂರು:(ಫೆ21): ಡಿಸಿಪಿ ಅಣ್ಣಾಮಲೈ ಅವರು ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಪಟ್ಟಿಯಲ್ಲಿ ಅಣ್ಣಾಮಲೈರವರ ಹೆಸರು ಸೇರ್ಪಡೆಯಾಗಿತ್ತು. ಆದರೀಗ ಸರ್ಕಾರ ಅವರನ್ನು ವರ್ಗಾಹಿಸುವುದಿಲ್ಲ ಎಂದು ಆದೇಶವನ್ನು ಹೊರಡಿಸಿದೆ.

ಈ ಹಿಂದೆ ಅಣ್ಣಾಮಲೈರವರು ಎಸ್ಪಿಯಾಗಿ ಚಿಕ್ಕಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸರ್ಕಾರ ರಾಜ್ಯದ ರಾಜಧಾನಿಯಲ್ಲಿ ಭೂ ಮಾಫಿಯ ಹಾಗೂ ದರೋಡೆಕೋರರನ್ನು ಮಟ್ಟ ಹಾಕಲು ಬೆಂಗಳೂರಿನ ದಕ್ಷಿಣ ವಿಭಾಗಕ್ಕೆ ಅವರನ್ನು ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು, ಈಗ ಮತ್ತೆ ವರ್ಗಾವಣೆಯ ಪಟ್ಟಿಯಲ್ಲಿ ಅಣ್ಣಾಮಲೈರವರ ಹೆಸರಿರುವುದು ಗೊಂದಲದ ಜೊತೆಗೆ ಚರ್ಚೆಗೆ ಗ್ರಾಸವಾಗಿತ್ತು.ಆದರೀಗ ಇದಕ್ಕೆ ಉತ್ತರ ಸಿಕ್ಕಿದೆ. ವರ್ಗಾವಣೆ ಮಾಡುವ ಅಧಿಕಾರಿಗಳ ಹೆಸರನ್ನು ಟೈಪ್ ಮಾಡುವಾಗ ಸಿಬ್ಬಂದಿ ಮಿಸ್ ಆಗಿ ಅವರ ಹೆಸರನ್ನು ಸೇರಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈಗಾ ಸರ್ಕಾರ ಅಣ್ಣಾಮಲೈರವರನ್ನು ವರ್ಗಾವಣೆ ಮಾಡುವುದಿಲ್ಲವೆಂದು ತಿಳಿಸಿದೆ.