ಬೆಂಗಳೂರು(ಜೂನ್.11) ಕಳೆದ ತಿಂಗಳು ತಮ್ಮ ಪೊಲೀಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಸೋಮವಾರ ತಮ್ಮ ಡಿಸಿಪಿ ಹುದ್ದೆಯ ಜವಾಬ್ದಾರಿಯನ್ನು ಇನ್ನೊಬ್ಬ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.

ಸೋಮವಾರ ಸಂಜೆ ನೂತನ ಡಿಸಿಪಿಯಾಗಿ ನೇಮಕಗೊಂಡ ರೋಹಿಣಿ ಕಟೋಚ್ ಸಪೆಟ್ ಅವರಿಗೆ ಅಣ್ಣಾಮಲೈ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಇದರ ಮೂಲಕ ಪೊಲೀಸ್ ಇಲಾಖೆಯಿಂದ ಅಣ್ಣಾಮಲೈ ಅವರ ಸೇವೆಯ ಪರ್ವವನ್ನು ಕೊನೆಗೊಳಿಸಿದ್ದಾರೆ.

ಕೇಂದ್ರ ಸರ್ಕಾರವು ಅಣ್ಣಾಮಲೈ ಅವರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ. ಆದರೆ ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಅವರ ರಾಜೀನಾಮೆ ಪತ್ರ ತಲುಪಿದೆ. ಇನ್ನೊಂದು ವಾರದಲ್ಲಿ ರಾಜೀನಾಮೆ ಅಂಗೀಕಾರದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.