ತುಮಕೂರು:(ಜೂನ್.12): ತಮಕೂರಿನ ಬೇಳೂರು ಬಾಯರ್ಸ ಮೆಡಿಷನ್ ಕೈಗಾರಿಕೆಯಿಂದ ಪರಿಸರಕ್ಕೆ ಹಾಗೂ ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್‍ನ್ಯೂಸ್ ವರದಿಗಾರ ಹಾಗೂ ಕ್ಯಾಮರಾ ಮನ್ ಸೇರಿದಂತೆ ಮೂರು ಖಾಸಗಿ ವಾಹಿನಿಯ ವರದಿಗಾರರು ಹಾಗೂ ಕ್ಯಾಮರಾ ಮನ್ ವರದಿ ಮಾಡಲು ತೆರಳಿದ್ದರು. ಈ ವೇಳೆ ಪ್ಯಾಕ್ಟರಿಯಾ ಸಿಬ್ಬಂದಿಗಳು ಮರಣಾಂತಿಕ ಹಲ್ಲೆ ನಡೆಸಿದ್ದಾರೆ.

ಇನ್ನೂ ಹಲ್ಲೆಗೆ ಒಳಗಾದ ವರದಿಗಾರರನ್ನು ಹಾಗೂ ಕ್ಯಾಮರಾ ಮನ್‍ಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಈ ದಾಳಿಯ ಕುರಿತು ವಿಚಾರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆ ಪ್ಯಾಕ್ಟರಿಯಾ ಸಿಬ್ಬಂದಿಗಳು ಏಕಾಏಕಿ ದಾಳಿ ನಡೆಸಿರುವುದು ಖಂಡನೀಯ ಈ ವಿಚಾರದ ಕುರಿತು ಈಗಾಗಲೇ ಎಸ್.ಪಿ 4-5 ಜನರನ್ನು ಬಂಧಿಸಿದ್ದು, ಇನ್ನೂ ಹೆಚ್ಚು ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂದು ಎಸ್.ಪಿ ಗೆ ತಿಳಿಸಲಾಗಿದೆ ಎಂದಿದ್ದಾರೆ.