ಮಂಡ್ಯ(ಜೂ:08): ಶಂಕುಸ್ಥಾಪನೆ ಸಂದರ್ಭದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ಗ್ರಾಮಸ್ಥರ ವಿರುದ್ಧ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು , ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಮತಹಾಕದ ಜನರ ವಿರುದ್ಧ ತಿರುಗಿಬಿದ್ದಿದ್ದಾರೆ. ಇನ್ನೇನು ಜೋಡೆತ್ತುಗಳು ಬರುತ್ತವೆ, ಕರೆದು ಹತ್ತಿಸಿಕೊಳ್ಳಿ, ಸಮಸ್ಯೆಗಳಿಗೆ ಪರಿಹಾರ ನೀಡಲು ಅವರು ಬರುತ್ತಾರಾ? ಈಗ ಮೆಡಗಾರಿಕೆ ಮಾಡಲು ಬರ್ತೀರಾ? ಆಗ ಎಲ್ಲೋಗಿತ್ತು? ಎಂದು ಪರೋಕ್ಷವಾಗಿ ದರ್ಶನ್ ಹಾಗೂ ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ, ನೀವೆಲ್ಲ ಅದನ್ನು ನೆನೆಸಿಕೊಂಡಿರಾ? ಈಗ ಬಂದು ಮಾತನಾಡುತ್ತಿದ್ದೀರಾ? ಎಂದು ಗ್ರಾಮಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಚುನಾವಣೆಯ ವೇಳೆ ತಮ್ಮಣ್ಣ ತಮ್ಮ ನಾಲಿಗೆ ಹರಿಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು.