ಡರ್ಬನ್(ಫೆ:14): ದಕ್ಷಿಣ ಆಫ್ರಿಕಾದ ಖ್ಯಾತ ವೇಗಿ ಡೇಲ್ ಸ್ಟೈನ್ ಮತ್ತೊಂದು ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕಪಿಲ್ ದೇವ್ ದಾಖಲೆಯನ್ನು ಮುರಿದಿದ್ದಾರೆ.

ಡರ್ಬನ್ ನ ಕಿಂಗ್ಸ್ ಮೇಡ್ ಅಂಗಳದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯಾವಳಿಯ ಸಂದರ್ಭದಲ್ಲಿ ಸ್ಟೈನ್ ಈ ದಾಖಲೆಯನ್ನು ಬರೆದಿದ್ದು,ಮೊದಲ ದಿನದ ಪಂದ್ಯದಲ್ಲಿ ಲಹಿರು ತಿರಮನ್ನೆ ವಿಕೆಟ್ ಪಡೆದು ಕಪಿಲ್ ದೇವ್ ಅವರ 434 ವಿಕೆಟ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಗುರುವಾರ ಒಶಾಡ ಫರ್ನಾಂಡೋ ವಿಕೆಟ್ ಪಡೆದ ಸ್ಟೈನ್ 435ನೇ ವಿಕೆಟ್ ನೊಂದಿಗೆ ಈ ದಾಖಲೆ ಬರೆದಿದ್ದಾರೆ.

ಸ್ಟೈನ್ ಸದ್ಯ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದಾರೆ. ಬರೋಬ್ಬರಿ 800 ವಿಕೆಟ್ ಪಡೆದಿರುವ ಮುತ್ತಯ್ಯ ಮುರಳೀಧರನ್ ಮೊದಲನೇ ಸ್ಥಾನದಲ್ಲಿದ್ದಾರೆ.