ಬೆಂಗಳೂರು(ಮೇ:30): ಮನೆಯಲ್ಲಿ ಕರೆಂಟನ್ನು ಹೆಚ್ಚು ಬಳಕೆ ಮಾಡುತ್ತಿರುವವರು ಈಗಲೇ ಎಚ್ಚೆತ್ತುಕೊಳ್ಳಿ. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಕುರಿತಾಗಿ ಮಹತ್ವವಾದ ನಿರ್ಧಾರವನ್ನು ಕೈಗೊಂಡಿದೆ, ಈ ನಿರ್ಧಾರವು ಏಪ್ರಿಲ್ 1ರಿಂದ ಅನ್ವಹಿಸಲಾಗುತ್ತದೆ. ಚುನಾವಣೆ ಮುಗಿದ ಬೆನ್ನಲ್ಲೇ ಪ್ರತಿ ಯೂನಿಟ್ ವಿದ್ಯುತ್ ಗೆ 33 ಪೈಸೆಯಷ್ಟು ದರ ಏರಿಕೆ ಮಾಡಲಾಗಿದೆ. ಈ ಕುರಿತಾಗಿ ಇಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್ ಸಿ) ದಿಂದ ಅಧಿಕೃತ ಪ್ರಕಟನೆ ಹೊರಡಿಸಲಾಗಿದೆ.

ವಿದ್ಯುತ್ ದರ ಏರಿಕೆ ಕುರಿತಾಗಿ 5 ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯುನಿಟ್ ಗೆ ರೂ.1.01 ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಕೆ ಇ ಆರ್ ಸಿ ಇಂದ 33 ಪೈಸೆಯಷ್ಟು ಏರಿಕೆ ಮಾಡಲು ಸಮ್ಮತಿ ಸೂಚಿಸಿ ಅಧಿಕೃತ ಪ್ರಕಟನೆ ಹೊರಡಿಸಿದೆ.

ಈ ಕುರಿತಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರು ಶಂಭು ದಯಾಳ್ ಮೀನಾ ಪ್ರತಿಕ್ರಿಯಿಸಿದ್ದು ಮೆಸ್ಕಾಂ 1 ಯುನಿಟ್ ಮತ್ತು ಸೆಸ್ಕ್ 1 ಯುನಿಟ್ ಗೆ 33 ಪೈಸೆಯಷ್ಟು ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.