ಬೆಂಗಳೂರು(ಜ:16): ರಾಜರಾಜೇಶ್ವರಿ ನಗರದಲ್ಲಿ,ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮವನ್ನು ಕವಿಗಳಾದ ಹೆಚ್.ಎಸ್ ವೆಂಕಟೇಶಮೂರ್ತಿ ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಪ್ರಕೃತಿ ಹಾಗೂ ಪರಿಸರ ಕಲೆಯನ್ನು ನಾವು ಸ್ತ್ರೀ ರೂಪದಲ್ಲಿ ಕಾಣುತ್ತೇವೆ,ಪ್ರಕೃತಿಯೇ ನಮ್ಮ ಪರಂಪರೆಯ ಉಳಿವಿಕೆಗೆ ಕಾರಣ. ಮಹಿಳೆಯರಿಗೆ ಸಮಪಾಲು,ಸಮವಾದ ಅಧಿಕಾರ ಹಾಗೂ ಗೌರವವನ್ನು ನೀಡಬೇಕು ಆಗ ಮಾತ್ರ ಗ್ರಾಮೀಣ ಸಂಸ್ಕೃತಿ ಹಾಗೂ ಇತಿಹಾಸ ಉಳಿಯಲು ಸಾಧ್ಯ ಎಂದರು.

ನಂತರ ಮಾತನಾಡಿದ ಉಪ ಆಯುಕ್ತ ಅನುಚೇತನ ಅವರು ಸಂಸ್ಕೃತಿ,ಸಂಪ್ರದಾಯ,ಕಲೆ, ಹಬ್ಬ ಆಚರಣೆಗಳು ನಮ್ಮ ಹೆಮ್ಮೆಯ ಪ್ರತೀಕ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಬಿಬಿಎಂಪಿ ಮಾಜಿ ಸದಸ್ಯರಾದ ಜಿ.ಹೆಚ್ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಕ್ರಾಂತಿ ಸಂತೆಯಲ್ಲಿ ಹಲವಾರು ಕರಕುಶಲ ಜವಳಿ,ಗುಡಿ ಕೈಗಾರಿಕೆ,ಸಾವಯವ ಪದ್ಧತಿಯ ಆಹಾರ ಮಾರಾಟ ಮೇಳ ನಡೆಯಿತು.