ಚೆನ್ನೈ(ಮಾ:21): ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ, ತವರಿನಲ್ಲಿ ನಡೆಯುವ ಐಪಿಎಲ್ ಮೊದಲ ಪಂದ್ಯದ ಗಳಿಕೆಯನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಲು ನಿರ್ಧರಿಸಿದೆ.

ಐಪಿಎಲ್ 12ನೇ ಆವೃತ್ತಿ ಮಾರ್ಚ್ 23ರಂದು ಶುರುವಾಗಲಿದ್ದು,ಸಿ ಎಸ್ ಕೆ ಯ ನಿರ್ದೇಶಕ ರಾಕೇಶ್ ಸಿಂಗ್, ಪಂದ್ಯದ ಹಣವನ್ನು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಲಾಗುವುದು ಎಂದಿದ್ದಾರೆ.

ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ತಿಳಿಸಿದ ಅವರು,ಚೆನ್ನೈ ನೆಲದಲ್ಲಿ ನಡೆಯುವ ಮೊದಲ ಐಪಿಎಲ್ ಪಂದ್ಯದಲ್ಲಿ ಬಂದ ಟಿಕೆಟ್ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಲಿದ್ದೇವೆ,ಧೋನಿ ಚೆಕ್ ನೀಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.