ನವದೆಹಲಿ (ಫೆ.19): ಪುಲ್ವಾಮ ಉಗ್ರರ ದಾಳಿ ಬಳಿಕ ಏಷ್ಯಾ ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಸೌದಿ ಅರೆಬೀಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿರುವ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ರಕ್ಷಣಾ ಒಪ್ಪಂದ ಹಾಗೂ ಜಂಟಿ ನೌಕದಳದ ಕುರಿತು ಸಮಾಲೋಚನೆ ನಡೆಸಲಿದ್ದು, ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಕೂಡ ಪ್ರಸ್ತಾಪವಾಗಲಿದೆ ಎನ್ನಲಾಗಿದೆ.

ಇನ್ನು ಸೌದಿ ರಾಜ ಭಾನುವಾರ ಇಸ್ಲಾಮಾಬಾದ್‍ಗೆ ಬಂದಿಳಿಯುವ ಮೂಲಕ ತಮ್ಮ ದಕ್ಷಿಣ ಏಷ್ಯಾಗಳ ಪ್ರವಾಸ ಆರಂಭಿಸಿದ್ದು, ಪಾಕಿಸ್ತಾನದಿಂದ ನೇರವಾಗಿ ಭಾರತಕ್ಕೆ ಆಗಮಿಸಲು ನಿಗದಿಯಾಗಿತ್ತು. ಆದರೆ ಪುಲ್ವಾಮ ದಾಳಿ ಬಳಿಕ ಅವರು ಪಾಕ್‍ನಿಂದ ನೇರವಾಗಿ ಭಾರತಕ್ಕೆ ಆಗಮಿಸುವುದಕ್ಕೆ ಆಕ್ಷೇಪನೆ ಕೇಳಿಬಂದ ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಇಸ್ಲಾಮಾಬಾದ್‍ನಿಂದ ಸೌದಿ ಅರೇಬಿಯಾದ ರಿಯಾದ್‍ಗೆ ತೆರಳಿದ್ದು, ಅಲ್ಲಿಂದ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ.

ಪುಲ್ವಾಮ ದಾಳಿಯನ್ನು ಇವರು ಕೂಡ ಖಂಡಿಸಿದ್ದಾರೆ. ಭೇಟಿ ವೇಳೆ ಪಾಕಿಸ್ತಾನ ಭಯೋತ್ಪಾದನಾ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲದ ಬಗ್ಗೆ ಎರಡು ರಾಷ್ಟ್ರಗಳು ನಿಯೋಗಗಳು ಚರ್ಚಿಸಲಿದೆ ಎನ್ನಲಾಗಿದೆ.

ಹೂಡಿಕೆ, ಪ್ರವಾಸೋದ್ಯಮ, ಮಾಹಿತಿ ಹಾಗೂ ಪ್ರಸಾರ ಕುರಿತು ಐದು ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿಹಾಕಲಿದ್ದಾರೆ ಎಂದು ಆರ್ಥಿಕ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಟಿಎಸ್ ತಿರುಮೂರ್ತಿ ತಿಳಿಸಿದ್ದಾರೆ.

ಗಡಿ ಉಲ್ಲಂಘನಾ ದಾಳಿ ಕುರಿತು ಮಾತನಾಡಿದ ಅವರು, ಫೆ.14ರಂದು ಪುಲ್ವಾಮದಲ್ಲಿ ನಡೆದ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿದೆ. ಭಯೋತ್ಪಾದನೆ ನಿಗ್ರಹಕ್ಕೆ ಅವರು ರಕ್ಷಣಾ ಸಹಕಾರವನ್ನು ನಾವು ಶ್ಲಾಘಿಸಬೇಕು ಎಂದಿದ್ದಾರೆ.