ಬೆಂಗಳೂರು(ಜೂನ್.10) ಬೆಂಗಳೂರಿನ IMA ಜ್ಯುವೆಲರ್‍ನಿಂದ ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆಯಾಗಿದೆ. ಚಿನ್ನಾಭರಣ ಜೊತೆಗೆ ಹೆಚ್ಚಿನ ಬಡ್ಡಿಯ ಆಸೆ ತೋರಿಸಿದ್ದ ಜ್ಯುವೆಲರಿ ಮಾಲೀಕ ಮನ್ಸೂರ್ ಅಲಿಖಾನ್ ನೂರಾರು ಕೋಟಿ ರೂಪಾಯಿ ಸಂಗ್ರಹಿಸಿ ನಾಪತ್ತೆಯಾಗಿದ್ದಾರೆ.

ಈ ನಡುವೆ IMA ಜ್ಯುವೆಲರಿ ಮಾಲೀಕ ಮನ್ಸೂರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿದೆ.

ರೋಷನ್ ಬೇಗ್ ಅವರ ಹತ್ತಿರ ನನ್ನದೇ 400 ಕೋಟಿ ರೂಪಾಯಿ ಇದೆ ಎಂದು ಹೇಳಿದ್ದಾರೆ. ಈಗ ಹಣ ಕೇಳಿದರೆ ನಮಗೆ ಧಮ್ಕಿ ಹಾಕುತ್ತಿದ್ದಾರೆ ಎಂದು IMA ಜ್ಯುವೆಲರಿ ಮಾಲೀಕ ಮಾನ್ಸೂರ್ ಮಾತನಾಡಿದ್ದಾರೆ.

ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ರೊಷನ್ ಬೇಗ್ ಅವರು ನನಗೆ ಮನ್ಸೂರ್ ಗೆ ಯಾವುದೇ ಸಂಬಂಧವಿಲ್ಲ, ನಮ್ಮ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ ನಾನು ಅವರ ಹತ್ತಿರ ಯಾವುದೇ ಹಣ ಸ್ವೀಕರಿಸಿಲ್ಲ ಎಂದು ರೋಷನ್ ಬೇಗ್ ಹೇಳಿಕೆ ನೀಡಿದ್ದಾರೆ.