ಜೈಪುರ್(ಜ.15): ಹಿರಿಯ ಕಾಂಗ್ರೆಸ್ ನಾಯಕ ಸಿ,ಪಿ.ಜೋಶಿ ಅವರು ರಾಜಸ್ಥಾನದ 15ನೇ ಅಸೆಂಬ್ಲಿಗೆ ಸ್ಪೀಕರ್ ಆಗಿ ಆಯ್ಕೆ ಹೊಂದಲಿದ್ದಾರೆ ಎಂದು ಸೋಮವಾರ ಕಾಂಗ್ರೆಸ್ ಪಾರ್ಟಿ ಮೂಲಗಳು ತಿಳಿಸಿವೆ.

68ನೇ ವಯೋಮಾನದ ಜೋಶಿಯವರು ನಾಥ್ವಾರಾ ಅಸೆಂಬ್ಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 15 ನೇ ಲೋಕಸಭೆಗೆ ಅವರು ಭಿಲ್ವಾರಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

2009 ರಿಂದ 2013 ರವರೆಗೆ ಅವರು ರಸ್ತೆಸಾರಿಗೆ ಹೆದ್ದಾರಿ ಮತ್ತು ಪಂಚಾಯಿತ್ ರಾಜ್ ಸಚಿವರಾಗಿ ಕೇಂದ್ರ ಸರ್ಕಾರದಲ್ಲಿ ಸೇವೇ ಸಲ್ಲಿಸಿದ್ದಾರೆ. ಹಿರಿಯ ಬಿಜೆಪಿ ಶಾಸಕ ಗುಲಾಬ್ ಚಂದ ಕಕಾರಿಯ ಹಂಗಾಮಿ ಸ್ಪೀಕರ್ ಆಗಿ ಸೋಮವಾರದಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜನವರಿ 16 ರಂದು ರಾಜಸ್ಥಾನ ಅಸಂಬ್ಲಿಯ ಸ್ಪೀಕರ್ ಆಗಿ ಸಿಪಿ ಜೋಶಿಯವರು ಆಯ್ಕೆಯಾಗಲಿದ್ದು, ಅದೇ ದಿನ ಗವರ್ನರ್ ಕಲ್ಯಾಣ ಸಿಂಗ್ ರವರು ಪ್ರಮಾಣ ವಚನ ಬೋಧಿಸಲಿದ್ದಾರೆ.