ಧಾರವಾಡ(ಮಾ:22): ನಿರ್ಮಾಣ ಹಂತದ ಕಟ್ಟಡ ಕುಸಿದು ಅವಶೇಷಗಳಡಿ ಮೂರು ದಿನಗಳಿಂದ ಬಂಧಿಯಾಗಿದ್ದ ದಂಪತಿಗೆ ಇಂದು ಬಿಡುಗಡೆಯ ಭಾಗ್ಯ ಸಿಕ್ಕಂತಾಗಿದೆ. ದಿಲೀಪ್‌ ಅವರನ್ನು ಹೊರಗೆ ಕರೆತರಲು ಈ ಮೊದಲೇ ಸಾಕಷ್ಟು ಅವಕಾಶಗಳಿದ್ದವು ಆದರೆ ಹೆಂಡತಿಯನ್ನು ಬಿಟ್ಟು ನಾನು ಹೊರಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದ ಕಾರಣ ಕಾರ್ಯಾಚರಣೆ ಸ್ವಲ್ಪ ತಡವಾಯಿತು ಆದರೆ ಅದೃಷ್ಟವೆಂಬಂತೆ ಇಬ್ಬರೂ ಸಾವನ್ನು ಗೆದ್ದು ಬಂದಿದ್ದಾರೆ.

ಮಂಗಳವಾರ ಸಂಭವಿಸಿದ್ದ ಅವಘಡದಲ್ಲಿ ಈ ವರೆಗೆ 14 ಮಂದಿ ಮೃತಪಟ್ಟಿದ್ದು, 62ಜನರನ್ನು ರಕ್ಷಣೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಯುವಕನೊಬ್ಬನನ್ನು ಎನ್​ಡಿಆರ್​ಆಫ್​ ಪಡೆ ಜೀವಂತವಾಗಿ ಹೊರತೆಗೆದಿತ್ತು. ಇದೀಗ ಇನ್ನಿಬ್ಬರು ಬದುಕಿ ಬಂದಿದ್ದಾರೆ.