ಮಂಡ್ಯ(ಜೂನ್.14) ಸಚಿವ ರೇವಣ್ಣನವರ ಜಿಲ್ಲೆಯಲ್ಲಿ ಮಹಾನ್ ಅಕ್ರಮ ನಡೆದ ಸುದ್ದಿಯು ಬೆಳಕಿಗೆ ಬಂದಿದೆ.

ಹಾಸನದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಹೆಸರಿನಲ್ಲಿ 234 ಕೋಟಿ ರೂ. ಅಕ್ರಮವಾಗಿದೆ ಎನ್ನಲಾಗಿದೆ. ಹೇಮಾವತಿ ಎಡದಂಡೆ ನಾಲೆ ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಈ ಅಕ್ರಮ ನಡೆದಿದೆ.

2 ಲಕ್ಷ ಲೋಡ್ ಮಣ್ಣಿನ ಲೆಕ್ಕ ತೋರಿಸಿ ಬಿಲ್ ಪಾಸ್ ಮಾಡಲಾಗಿದೆ. 1 ಕಿ.ಮೀ. ರಸ್ತೆಗೆ 1.5 ಕೋಟಿಯಿಂದ 2 ಕೋಟಿ ವೆಚ್ಚ ನಿಗದಿ ಮಾಡಿ ಅನುಮೋದನೆ ಮಾಡಲಾಗಿದೆ. 2 ಕೋಟಿಗೆ 1 ಕಿ.ಮೀ. ಕಾಂಕ್ರೀಟ್ ರಸ್ತೆಯನ್ನೇ ನಿರ್ಮಿಸಬಹುದು. ಆದರೆ ಮಣ್ಣಿನ ಲೆಕ್ಕ ತೋರಿಸಿ ಅಧಿಕಾರಿಗಳಿಂದ ಗೋಲ್ ಮಾಲ್ ಮಾಡಲಾಗಿದೆ.

ಹಿರಿಯ ಅಧಿಕಾರಿಗಳ ಪತ್ರಕ್ಕೂ ಜ್ಯೂನಿಯರ್ ಆಫೀಸರ್ಸ್ ಲೆಕ್ಕಿಸದೇ ಈ ಗೋಲ್ ಮಾಲ್ ನಡೆಸಿದ್ದಾರೆ.