ಕೊಟ್ಟಿಗೆಹಾರ(ಜ:೦೨):ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಚಾರ್ಮಾಡಿ ಘಾಟ್ ಅರಣ್ಯದಲ್ಲಿ ಕಾಡ್ಗಿಚ್ಚು ಮುಂದುವರಿದ ಪರಿಣಾಮ ನೂರಾರು ಎಕರೆ ಕಾಡು ಸುಟ್ಟು ಹೋಗಿದೆ.
ನೂರಾರು ಗಿಡಮರಗಳು ಸುಟ್ಟು ಕರಕಲಾಗಿದ್ದು ವನ್ಯ ಜೀವಿಗಳು ಜೀವ ಉಳಿಸಿಕೊಳ್ಳಲು ಪರದಾಡುವಂತಿದೆ.
ಸಣ್ಣ ಪ್ರಮಾಣದ ಬೆಂಕಿ ಕಳೆದ ೫ ವರ್ಷಗಳ ಹಿಂದೆ ಕಾಣಿಸಿಕೊಂಡಿತ್ತು ಆದರೆ ಇದೀಗ ಅದೇ ಬೆಂಕಿ ನೂರಾರು ಎಕರೆ ಕಾಡಿಗೆ ಆವರಿಸಿದೆ .