ನವದೆಹಲಿ:(ಫೆ01): ಅತ್ಯಾಧುನಿಕ ನೂತನ ಸಬ್ ಮೆರಿನ್‍ಗಳನ್ನು ನಿರ್ಮಿಸಿಲು ಸರ್ಕಾರ ಮುಂದಾಗಿದೆ.

ಭಾರತೀಯ ನೌಕಾ ಶಕ್ತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಈ ನೂತನ ಸಬ್ ಮೆರಿನ್‍ನನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಒಟ್ಟು 06 ಸಬ್ ಮೆರಿನ್ ಹಾಗೂ ಫ್ರಾನ್ಸ್‍ನಿಂದ 2ಟಿ ನಿರ್ದೇಶಿತ ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ಈ ಆರು ಸಬ್ ಮೆರಿನ್‍ಗಳು “ಪ್ರಾಜೆಕ್ಟ್-751” ಹೆಸರಿನಲ್ಲಿ ನಿರ್ಮಾಣವಾಗುತ್ತಿವೆ. ಈ ಸಬ್ ಮೆರಿನ್ ನಿರ್ಮಾಣಕ್ಕೆ ಫ್ರಾನ್ಸ್, ಸ್ವಿಡನ್, ರಷ್ಯಾ, ಜರ್ಮನಿ, ಹಡಗು ನಿರ್ಮಾಣ ಸಂಸ್ಥೆಗಳು ಸಹಾಯ ನೀಡಲು ಮುಂದಾಗಿವೆ ಎನ್ನಲಾಗಿದೆ.

ನೂತನವಾಗಿ ನಿರ್ಮಾಣ ಮಾಡುತ್ತಿರುವ ಈ ಸಬ್ ಮೆರಿನ್‍ಗಳು ನೌಕಾಸೇನೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿದು ಬಂದಿದೆ.