ಬೆಂಗಳೂರು(ಮೇ.31) ಲೋಕಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಮತ್ತೊಂದು ಚುನಾವಣೆಯು ಎದುರಾಗಿದೆ. ಕರ್ನಾಟಕದ ಒಟ್ಟು 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ.29 ರಂದು ಚುನಾವಣೆಯನ್ನು ನಡೆಸಲಾಗಿದೆ.

ಚುನಾವಣೆಯ ಫಲಿತಾಂಶವು ಇಂದು ಪ್ರಕಟವಾಗಿದ್ದು ಕಾಂಗ್ರೆಸ್ ಪಕ್ಷ ಮೆಲುಗೈ ಸಾಧಿಸಿದೆ. ಪುರಸಭೆ ಮತ್ತು ನಗರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಮತ್ತು ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಪಕ್ಷ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಒಟ್ಟು 8 ನಗರಸಭೆ 32 ಪುರಸಭೆ ಮತ್ತು 21 ಪಟ್ಟಣ ಪಂಚಾಯತಿಗಳ ಒಟ್ಟು 1326 ವಾರ್ಡ್‍ಗಳಲ್ಲಿ ಚುನಾವಣೆಯನ್ನು ನಡೆಸಲಾಗಿದೆ.

ಪುರಸಭೆಯ 717 ವಾರ್ಡ್‍ಗಳಲ್ಲಿ ಬಿಜೆಪಿ 119 ರಲ್ಲಿ ಗೆಲುವನ್ನು ಸಾಧಿಸಿದೆ. ಕಾಂಗ್ರೆಸ್ 251ರಲ್ಲಿ ಮತ್ತು ಜೆಡಿಎಸ್ 75ರಲ್ಲಿ ಮುನ್ನಡೆಯನ್ನು ಸಾಧಿಸಿದೆ.