ನವದೆಹಲಿ(ಏ.02): ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಹಮ್ ನಿಭಾಯೇಂಗೆ ಎಂಬ ಹೆಸರಲ್ಲಿ ಕೈ ಪ್ರಣಾಳಿಕೆ ಬಿಡುಗಡೆ ಆಗಿದೆ. ಇನ್ನು ಪ್ರಣಾಳಿಕೆಯಲ್ಲಿ 5 ಪ್ರಮುಖ ಅಂಶಗಳಿಗೆ ಅದ್ಯತೆ ನೀಡಲಾಗಿದೆ.

ಬಡವರ ಖಾತೆಗಳಿಗೆ ಶೇಕಡಾ 20 ರಷ್ಟು ಹಣ ಬಿಡುಗಡೆ, ನಿರುದ್ಯೋಗ ನಿವಾರಣೆ, ಬಡತನ ನಿರ್ಮೂಲನೆಗೆ ಹೆಚ್ಚಿನ ಆದ್ಯತೆ, ಶೇಕಡಾ 20 ರಷ್ಟು ಬಡವರ ಕುಟುಂಬಗಳ ಖಾತೆಗೆ ಹಣ, ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ಮನ್ರೇಗಾ ಯೋಜನೆಯಡಿ 150 ದಿನ ಉದ್ಯೋಗ, ಗ್ರಾಮ ಪಂಚಾಯಿತಿಯಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ಸೇರಿದಂತೆ ಅಧಿಕಾರಕ್ಕೆ ಬಂದ ಮೊದಲ ದಿನವೇ ರಫೇಲ್ ಹಗರಣದ ತನಿಖೆ ಪ್ರಾರಂಭ
ಹಾಗೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ರದ್ದು ಮುಂತಾದ ಭರವಸೆಗಳನ್ನು ನೀಡಲಾಗಿದೆ.